ಬಸವಕಲ್ಯಾಣ: ಬೈಕ್'ಗೆ ಟಾಟಾ ಸುಮೋ ಡಿಕ್ಕಿಯಾಗಿ ಬೈಕ್ ಸವಾರನೊಬ್ಬ ಸ್ಥಳದಲ್ಲೆ ಮೃತಪಟ್ಟ ಘಟನೆ ತಾಲೂಕಿನ ಭೋಸ್ಗಾ ಗ್ರಾಮದ ಬಳಿ ಜರುಗಿದೆ. ತಾಲೂಕಿನ ಕಲಖೋರಾ ಗ್ರಾಮದ ನಿವಾಸಿ ಅಂಬಾರಾಯ ಸಾಯಬಣ್ಣ ಬಿರಾದಾರ (70) ಘಟನೆಯಲ್ಲಿ ಮೃತಪಟ್ಟ ವ್ಯಕ್ತಿಯಾಗಿದ್ದಾನೆ. ಈ ಕುರಿತು ಮಂಠಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ