ಚಿತ್ರದುರ್ಗ: ಮಾಡದಕೆರೆಹಟ್ಟಿ ಬಳಿ ಖಾಸಗಿ ಬಸ್ ಡಿಕ್ಕಿ ಹೊಡೆದು ವ್ಯಕ್ತಿ ಸಾವು
ಮಾಡದಕೆರೆಹಟ್ಟಿ ಬಳಿ ಖಾಸಗಿ ಬಸ್ ಡಿಕ್ಕಿ ಹೊಡೆದು ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ನಡೆದಿದೆ. ಮಂಗಳವಾರ ಸಂಜೆ 7 ಗಂಟೆ ವೇಳೆ ಚಿತ್ರದುರ್ಗ ತಾಲ್ಲೂಕಿನ ಶಿವಮೊಗ್ಗ ರಸ್ತೆಯ ದೇವಪುರದಹಟ್ಟಿ ಬಳಿಯ ಮಾಡದಕೆರೆ ಹಟ್ಟಿ ಬಳಿಯ ಪೆಟ್ರೋಲ್ ಬಂಕ್ ಬಳಿ ಘಟನೆ ನಡೆದಿದ್ದು ಮೃತನ ಗುರುತು ಇನ್ನೂ ಪತ್ತೆಯಾಗಬೇಕಿದೆ