ಗುಂಡ್ಲುಪೇಟೆ: ವೀರನಪುರದಲ್ಲಿ ದೇಗುಲ ಪ್ರವೇಶ ಸಂಬಂಧ ಜಾತಿನಿಂದನೆ ಆರೋಪ: 17 ಮಂದಿ ವಿರುದ್ಧ ಕೇಸ್ ದಾಖಲು
ದೇಗುಲ ಪ್ರವೇಶ ನಿರಾಕರಣೆ ಸಂಬಂಧ ಶಾಂತಿ ಸಭೆ ವೇಳೆ ಜಾತಿ ನಿಂದನೆ ಹಾಗೂ ಕೊಲೆ ಬೆದರಿಕೆ ಹಾಕಿದರೆಂಬ ಆರೋಪದಡಿ ಗುಂಡ್ಲುಪೇಟೆ ತಾಲೂಕಿನ ವೀರನಪುರ ಗ್ರಾಮದ 17 ಮಂದಿ ವಿರುದ್ಧ ಕೇಸ್ ದಾಖಲಾಗಿದೆ. ವೀರನಪುರ ಗ್ರಾಮದ ಗುರುಪ್ರಸಾದ್, ನಾಗಸುಂದರ್, ಮಹಾದೇವಪ್ಪ, ಶಂಭಫ್ಪ, ಮಂಜು, ನಾಗರಾಜು, ಮಲ್ಲು, ಮಧು, ವೀರಭದ್ರೇಶ್ವರ ದೇಗುಲ ಅರ್ಚಕರಾದ ಸೋಮಶೇಕರ್ ಹಾಗೂ ಶಿವಮೂರ್ತಪ್ಪ ಸೇರಿದಂತೆ ಗುಂಡ್ಲುಪೇಟೆ ಠಾಣೆಯಲ್ಲಿ 17 ಮಂದಿ ವಿರುದ್ಧ ಜಾತಿನಿಂದನೆ, ಕೊಲೆ ಬೆದರಿಕೆ ಆರೋಪದಡಿ ಕೇಸ್ ದಾಖಲಾಗಿದೆ.