ಶಿರಸಿ (ಬನವಾಸಿ) : ಮದ್ಯಪ್ರದೇಶದಲ್ಲಿ ನಡೆದ 69ನೇ ರಾಷ್ಟ್ರ ಮಟ್ಟದ ಶಾಲಾ ಕ್ರೀಡಾಕೂಟದಲ್ಲಿ ಶಿರಸಿ ತಾಲೂಕಿನ ಬನವಾಸಿಯ ಶ್ರೀ ಜಯಂತಿ ಪ್ರೌಢಶಾಲೆಯ ಎಂಟನೇ ತರಗತಿ ವಿದ್ಯಾರ್ಥಿ ಕುಮಾರ್ ಭರತ್ ಚೆನ್ನಯ್ಯ ಈತನು14 ವರ್ಷ ವಯೋಮಿತಿಯೊಳಗಿನ ಅಥ್ಲೆಟಿಕ್ ವಿಭಾಗದ ಗುಂಡು ಎಸೆತದಲ್ಲಿ 10 ನೇ ಸ್ಥಾನಗಳಿಸುವ ಮೂಲಕ ಗಮನ ಸೆಳೆದಿದ್ದಾನೆ. ಈ ಬಗ್ಗೆ ಭಾನುವಾರ ಸಂಜೆ 4:00 ಗಂಟೆ ಸುಮಾರಿಗೆ ಮಾಧ್ಯಮಕ್ಕೆ ಮಾಹಿತಿ ಲಭ್ಯವಾಗಿದೆ. ಅತ್ಯುತ್ತಮ ಕ್ರೀಡಾಪಟುವಾಗಿ ಸಾಕಷ್ಟು ಬಹುಮಾನಗಳನ್ನು ಮುಡಿಗೇರಿಸಿಕೊಂಡಿರುವ ಈತನಿಗೆ ದೈಹಿಕ ಶಿಕ್ಷಕ ಪ್ರಸನ್ನ ಗುನಗ ತರಬೇತಿ ನೀಡುತ್ತಿದ್ದಾರೆ.