ಕಲಬುರಗಿ : ಗೋವುಗಳನ್ನ ಸಾಗಾಟ ಮಾಡ್ತಿದ್ದ ಲಾರಿಯನ್ನ ತಡೆದಿದ್ದಕ್ಕೆ ಉದ್ರಿಕ್ತಗೊಂಡ ಯುವಕರು, ಇಬ್ಬರು ಹಿಂದೂ ಯುವಕರಿ ಮೇಲೆ ಹಿಗ್ಗಾಮುಗ್ಗಾ ಹಲ್ಲೆ ಮಾಡಿರೋ ಘಟನೆ ಕಲಬುರಗಿ ನಗರದ ರಿಂಗ್ ರಸ್ತೆಯ ರಾಮನಗರ ಬಳಿ ನವೆಂಬರ್ 26 ರಂದು ಸಂಜೆ 4 ಗಂಟೆಗೆ ಸಂಭವಿಸಿದೆ.. ಅಫಜಲಪುರದಿಂದ ಆಳಂದ ಕಡೆಗೆ ಹೋಗ್ತಿದ್ದ ಗೋವು ಸಾಗಾಟ ಲಾರಿಯನ್ನ ರೋಹಿತ್ ಮತ್ತು ಅನೀಲ್ ಸೇರಿಕೊಂಡು ತಡೆದಿದ್ದಾರೆ. ಈ ವೇಳೆ ಎರಡ್ಮೂರು ಯುವಕರು ದಾಖಲಾತಿ ಜೊತೆ ಅನುಮತಿ ಪಡೆದೆ ಗೋವು ಸಾಗಾಟ ಮಾಡ್ತಿದಿವಿ ಅಂತಾ ಹಲ್ಲೆ ಮಾಡಿದ್ದು, ಹಲ್ಲೆ ವಿಡಿಯೋ ವೈರಲ್ ಆಗಿದೆ. ಸಬ್ ಅರ್ಬನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.