ಶ್ರೀರಂಗಪಟ್ಟಣ: ಕಾಲುವೆಯಲ್ಲಿ ಈಜಲು ಇಳಿದ ಯುವಕನೋರ್ವ ನೀರಿನಲ್ಲಿ ಮುಳುಗಿ ಸಾವು, ಶ್ರೀರಂಗಪಟ್ಟಣ ತಾಲ್ಲೂಕು ಕೆ ಆರ್ ಎಸ್ ಬಳಿ ನಡೆದ ಘಟನೆ
ಶ್ರೀರಂಗಪಟ್ಟಣ : ಕಾಲುವೆಯಲ್ಲಿ ಈಜಲು ಇಳಿದ ಯುವಕನೋರ್ವ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ದುರ್ಘಟನೆಯೊಂದು ಶ್ರೀರಂಗಪಟ್ಟಣ ತಾಲ್ಲೂಕು ಕೆ ಆರ್ ಎಸ್ ಸಮೀಪದ ಬೊಮ್ಮಂ ಆಶ್ರಮದ ಬಳಿ ಜರುಗಿದೆ. ಮೈಸೂರಿನ ಹೆಬ್ಬಾಳ ಬಸವನಗುಡಿಯ ವಾಸಿ ಚಂದ್ರ ಎಂಬುವರ ಮಗನಾದ 17 ವರ್ಷದ ಆಕಾಶ್ ಎಂಬಾತನೇ ಮೃತಪಟ್ಟ ದುರ್ದೈವಿಯಾಗಿದ್ದಾನೆ ಭಾನುವಾರ ಸಾಯಂಕಾಲ 4 ಗಂಟೆ ಸಮಯದಲ್ಲಿ ಐವರು ಗೆಳೆಯರೊಂದಿಗೆ ಕಾವೇರಿ ನದಿಯ ದೊಡ್ಡ ಕಾಲುವೆಯಲ್ಲಿ ಈಜಾಡಲು ಬಂದಿದ್ದಾಗ ಈ ಘಟನೆ ಜರುಗಿದೆ.