ಚಿತ್ರದುರ್ಗ: ಅರಳಿಕಟ್ಟೆ ಬಳಿ ಹೊತ್ತಿ ಉರಿದ ಟಾಟಾ ನೆಕ್ಸಾನ್ ಕಾರು, ಚಾಲಕ ಸಜೀವ ದಹನ
ಅರಳಿಕಟ್ಟೆ ಬಳಿ ಕಾರಿಗೆ ಆಕಸ್ಮಿಕ ಬೆಂಕಿ ತಗುಲಿ ಚಾಲಕ ಸ್ಥಳದಲ್ಲ ಸುಟ್ಟು ಕರಕಲಾದ ಘಟನೆ ನಡೆದಿದೆ. ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಅರಳಿಕಟ್ಟೆ ಗ್ರಾಮದ ಬಳಿ ಮಂಗಳವಾರ ರಾತ್ರಿ 9 ಗಂಟೆ ವೇಳೆ ಘಟನೆ ನಡೆದಿದ್ದು ಅರಳೀಕಟ್ಟೆ ಗ್ರಾಮದ 35 ವರ್ಷದ ಸಿದ್ದೇಶ್ವರ ಮೃತ ದುರ್ದೈವಿಯಾಗಿದ್ದಾನೆ. ಇನ್ನೂ ಹಿರಿಯೂರಿನಿಂದ ಅರಳಿಕಟ್ಟೆ ಗೆ ಮರಳುವ ವೇಳೆ ಹಿರಿಯೂರು ಗುಲಿಯಾಳು ಟೋಲ್ ಬಳಿಯ ಅರಳಿಕಟ್ಟೆ ಬಳಿ ಘಟನೆ ನಡೆದಿದ್ದು ಬೆಂಕಿಯ ಕೆನ್ನಾಲಿಗೆಗೆ ಚಾಲಕ ಹೊರ ಬರಲಾಗದೆ ಸ್ಥಳದಲ್ಲೆ ಮೃತಪಟ್ಟಿದ್ದಾನೆ