ಚಾಮರಾಜನಗರ: ನಗರದಲ್ಲಿ ಆರ್ ಎಸ್ ಎಸ್ ಪಥ ಸಂಚಲನ: ನೂರಾರು ಮಂದಿ ಭಾಗಿ
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ನಗರದಲ್ಲಿ ವಿಜಯ ದಶಮಿ ಪಥ ಸಂಚಲನವು ವಿಜೃಂಭಣೆಯಿಂದ ಶನಿವಾರ ನಡೆಯಿತು.ಚಾಮರಾಜೇಶ್ವರಸ್ವಾಮಿ ದೇವಸ್ಥಾನದ ಮುಂಭಾಗದಿಂದ ಮೆರವಣಿಗೆ ಹೊರಟ ಗಣವೇಷಧಾರಿಗಳು ಗುಂಡ್ಲುಪೇಟೆ ವೃತ್ತ, ದೊಡ್ಡಂಗಡಿ ಬೀದಿ, ಚಿಕ್ಕಂಗಡಿ ಬೀದಿ ಸಂತೇಮರಹಳ್ಳಿ ವೃತ್ತದಲ್ಲಿ ಪಥ ಸಂಚಲನ ನಡೆಸಿದರು. ತೆರೆದ ವಾಹನದಲ್ಲಿ ಭಾರತಾಂಬೆ, ಹೆಡ್ಗೆವಾರ್, ಗೋಳ್ವಾಲ್ಕರ್ ಭಾವಚಿತ್ರವಿಟ್ಟು ನಡೆದ ಮೆರವಣಿಗೆಯಲ್ಲಿ ಚಿಣ್ಣರು ಸೇರಿ ನೂರಾರು ಮಂದಿ ಶಿಸ್ತಿನ ಹೆಜ್ಜೆ ಹಾಕಿದರು. ಬಿಜೆಪಿ ಮುಖಂಡರು, ಸಂಘದ ಕಾರ್ಯಕರ್ತರು ಉತ್ಸಾಹದಿಂದ ಪಥ ಸಂಚಲನದಲ್ಲಿ ಭಾಗಿಯಾಗಿ ಗಮನ ಸೆಳೆದರು.