ಯಳಂದೂರು: ಪಿ.ಜಿ.ಪಾಳ್ಯ ಸಮೀಪದ ಕೆರೆಯಲ್ಲಿ ಮಿಂದೆದ್ದ ಗಜಪಡೆ- ಜಲಕ್ರೀಡೆ ವೀಡಿಯೋ ವೈರಲ್
ಬಿಸಿಲಿನ ತಾಪಕ್ಕೆ ಕೆರೆಯಲ್ಲಿ ಗಜಪಡೆ ಮಿಂದೆದ್ದ ಘಟನೆ ಹನೂರು ತಾಲೂಕಿನ ಪಿ.ಜಿ.ಪಾಳ್ಯ ಸಮೀಪ ನಡೆದಿದ್ದು ಕಾಡಾನೆಗಳ ಜಲಕ್ರೀಡೆ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಹನೂರು ತಾಲ್ಲೂಕಿನ ಪಿ.ಜಿ.ಪಾಳ್ಯ ಸಮೀಪ ಇದ್ದ ಕೆರೆಯಲ್ಲಿ, 6 ಆನೆಗಳ ಗುಂಪು ನೀರಿನಲ್ಲಿ ಇಳಿದು ಕೂಲ್ ಕೂಲ್ ಆಗಿದೆ. ಗಜಪಡೆ ಜಲಕ್ರೀಡೆಯ ದೃಶ್ಯ ಮೊಬೈಲ್ ನಲ್ಲಿ ದೃಶ್ಯ ಸೆರೆಯಾಗಿದ್ದು ವೈರಲ್ಲಾಗಿದೆ.