ಸಿಂಧನೂರು: ಸಿಂಧನೂರು : ಭತ್ತದ ನಾಡಿನ ರೈತರ ಅನುಕೂಲಕ್ಕಾಗಿ ಘಟಕ ಆರಂಭ
ಕಲ್ಯಾಣ ಕರ್ನಾಟಕ ಭಾಗದ ರೈತರ ಅನುಕೂಲಕ್ಕಾಗಿ ವಿತ್ತ ಸಚಿವರು ಈ ಭಾಗದಲ್ಲಿ ಕೃಷಿ ಸಂಸ್ಕರಣಾ ಘಟಕ ಸ್ಥಾಪಿಸಲು ಸೂಚಿಸಿದರು ಎಂದು ನಬಾರ್ಡ ಕಾರ್ಯದರ್ಶಿ ಶ್ರೀಶಾಜಿ ಹೇಳಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು. ರಾಯಚೂರು ಸೇರಿ ಸುತ್ತಲಿನ ಜಿಲ್ಲೆಯನ್ನು ಭತ್ತದ ನಾಡು ಅಂತ ಕರೆಯುತ್ತಾರೆ. ಇಲ್ಲಿ ಹೆಚ್ಚಗಿ ಭತ್ತ ಬೆಳೆಯಲಾಗುತ್ತದೆ. ಇಲ್ಲಿನ ರೈತರು ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದ್ದಾರೆ ಜೊತೆಗೆ ಕೃಷಿ ಜಾಗೃತಿ ಅವಶ್ಯಕತೆ ಇದೆ ಎಂಬ ನಿಟ್ಟಿನಲ್ಲಿ, ಸಚಿವರು ಕಳೆದ 9 ತಿಂಗಳ ಹಿಂದೆ ಈ ಒಂದು ಘಟಕ ಸ್ಥಾಪಿಸಲು ಸೂಚಿಸಿದ್ದರು. ಅವರ ನಿರ್ಧೆಶನದ ಮೇರೆಗೆ ಇಲ್ಲಿ ಘಟಕ ಸ್ಥಪಿಸಲಾಗಿದೆ ಎಂದರು.