ರೋಣ: ಬೆಳವಣಕಿಯಲ್ಲಿ ಅಕ್ರಮ ಓ.ಸಿ ಜೂಜಾಟ, ಒರ್ವ ಆರೋಪಿ ಬಂಧನ
Ron, Gadag | Sep 30, 2025 ಬೆಳವಣಕಿ ಗ್ರಾಮದ ಬಸ್ ನಿಲ್ದಾಣದ ಮುಂದೆ ಸಾರ್ವಜನಿಕ ರಸ್ತೆ ಮೇಲೆ ತನ್ನ ಸ್ವಂತ ಲಾಭಕ್ಕೊಗೋಸ್ಕರ ಬೀಮಪ್ಪ ಛಲವಾದಿ ಸಾ: ಬೆಳವಣಕಿ ಇವರು ರಸ್ತೆಯಲ್ಲಿ ಬರ ಹೋಗುವ ಜನರಿಗೆ ಕರೆದು 1/- ರೂ ಕ್ಕೆ 80/-ರೂ ಕೊಡುವುದಾಗಿ ಹೇಳಿ ಅಕ್ರಮವಾಗಿ ಓ.ಸಿ ಮಟಕಾ ಜೂಜಾಟವನ್ನು ಆಡಿಸುತ್ತಿದ್ದ ಬಗ್ಗೆ ಮಾಹಿತಿ ತಿಳಿದು ಠಾಣೆಯ ಸಿಬ್ಬಂದಿ ಪ್ರಕಾಶ ಬಣಕಾರ ಪಿಎಸ್ಐ ವವರ ನೇತೃತ್ವದಲ್ಲಿ ದಾಳಿ ಮಾಡಿ ಆರೋಪಿಗಳಿಂದ ಒಂದು ಓಸಿ ಅಂಕಿ ಸಂಖ್ಯೆ ಬರೆದ ಚೀಟಿ, ಒಂದು ಬಾಲ್ ಪೆನ್ ಹಾಗೂ 465/-ರೂಗಳನ್ನು ಜಪ್ತಿ ಮಾಡಿ ಸರ್ಕಾರಿ ತರ್ಪಿ ಪಿರ್ಯಾದಿ ನೀಡಿದ್ದನ್ನು ಸ್ವೀಕರಿಸಿಕೊಂಡು ಆರೋಪಿತನ ವಿರುದ್ಧ ಗುನ್ನಾ ನಂ: 171/2025, ಕಲಂ: 78(3) ಕೆ.ಪಿ.ಯಾಕ್ಟ್ & 112 ಬಿಎನ್ಎಸ್-2023 ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೋಳ್ಳಲಾಗಿದೆ.