ಕಲಬುರಗಿ: ನಗರದ ಆಳಂದ ಚೆಕ್ಪೋಸ್ಟ್ ಟೂ ತಾಜ್ ಕಾಲೇಜು ಬಳಿ 'ಥಾರ್' ಕಾರು ಪಲ್ಟಿ: ಅದೃಷ್ಟವಶಾತ್ ಮೂವರು ಪ್ರಾಣಾಪಾಯದಿಂದ ಪಾರು
ಕಲಬುರಗಿ : ಕಲಬುರಗಿ ನಗರದ ಆಳಂದ ಚೆಕ್ಪೋಸ್ಟ್ ಬಳಿ 'ಥಾರ್' ಕಾರೊಂದು ವೇಗವಾಗಿ ಬಂದು ಡಿವೈಡರಗೆ ಡಿಕ್ಕಿಯಾಗಿ ಪಲ್ಟಿಯಾದ ಘಟನೆ ನಡೆದಿದೆ.. ಅ19 ರಂದು ರಾತ್ರಿ 7 ಗಂಟೆಗೆ ಮಾಹಿತಿ ಲಭ್ಯವಾಗಿದೆ.. ಆಳಂದ ಚೆಕ್ಪೋಸ್ಟ್ನಿಂದ ಹೀರಾಪುರ ಕ್ರಾಸ್ ಹೋಗೋ ಮಾರ್ಗದಲ್ಲಿರೋ ತಾಜ್ ಕಾಲೇಜು ಬಳಿ ವೇಗವಾಗಿ ಬಂದ ಕಾರೊಂದು ಪಲ್ಟಿಯಾಗಿ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅಪಘಾತ ಬಳಿಕ ಪಲ್ಟಿಯಾಗಿ ಬಿದ್ದಿದ್ದ ಕಾರನ್ನ ಮೇಲೆತ್ತಿಕೊಂಡು ಅಲ್ಲಿಂದ ಹೋಗಿದ್ದು, ಸಂಚಾರಿ ಠಾಣೆ-2 ರ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ