ಸಿಎಂ ಸಿದ್ದರಾಮಯ್ಯ ಸರಕಾರ ಜನರಿಗೆ ನೀಡಿರುವ ಯೋಜನೆಗಳು ಸಾಲ ಮಾಡಿ ಆದ್ರೂ ತುಪ್ಪ ತಿನ್ನು ಎನ್ನುವ ಮಾತಿನಂತೆ ಇವೆ. ಆದ್ರೆ ಜಿರಾಂಜಿ ದೇಶದ ಆಸ್ತಿ ನಿರ್ಮಾಣ ಮಾಡುವ ಯೋಜನೆಯಾಗಿದೆ. ಕಾಂಗ್ರೆಸ್ ನಾಯಕರು ಇದನ್ನು ವಿರೋಧ ಮಾಡೋದು ಸರಿಯಲ್ಲ ಅಂತಾ MLC KS ನವೀನ್ ಗ್ಯಾರಂಟಿ ಯೋಜನೆ ಬಗ್ಗೆ ವ್ಯಂಗ್ಯವಾಡಿದ್ದಾರೆ. ಮನರೆಗಾ ಯೋಜನೆಗೆ ಕೇಂದ್ರ ಸರಕಾರ ಹೊಸ ನಾಮಕರಣ ಮಾಡುತ್ತಿರುವುದನ್ನ ಕಾಂಗ್ರೆಸ್ ವಿರೋಧಿಸುತ್ತಿದೆ. ಮನರೇಗಾದಲ್ಲಿ ಸಾಕಷ್ಟು ಅವ್ಯವಹಾರ ನಡೆಯುತ್ತಿದ್ದು, ಅದನ್ನು ತಡೆಯುವ ಉದ್ದೇಶದಿಂದ ಕೇಂದ್ರ ಹಾಗೂ ರಾಜ್ಯ ಸರಕಾರಗಳ 60/40 ಅನುದಾನದಡಿ ಜೀರಾಂಜಿ ವಿಕಸಿತ ಭಾರತ ಯೋಜನೆ ರೂಪಿಸಲಾಗಿದೆ.