ಶಿವಮೊಗ್ಗ: ನ್ಯಾಮತಿ ಪೊಲೀಸರ ಕಾರ್ಯಾಚರಣೆ: ಶಿವಮೊಗ್ಗದ ನಾಲ್ವರು ಸೇರಿ ಐವರು ಆರೋಪಿಗಳ ಬಂಧನ
ಹೊನ್ನಾಳಿಯ ಶಿವಮೊಗ್ಗ ರಸ್ತೆ ಬದಿಯ ಕಲ್ಪಿಗಿರಿ ರಂಗನಾಥ ಸ್ವಾಮಿ ದೇವಸ್ಥಾನಕ್ಕೆ ತೆರಳುವ ಮಾರ್ಗದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಶಿವಮೊಗ್ಗ ಮೂಲದ ನಾಲ್ವರು ಸೇರಿ ಐದು ಜನ ಆರೋಪಿಗಳನ್ನ ನ್ಯಾಮತಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ ಬಂಧಿತ ಆರೋಪಿಗಳನ್ನ ಶಿವಮೊಗ್ಗದ ಅರ್ಬಾನ್ ಖಾನ್(27), ಮಹಮ್ಮದ್ ಹುಸೇನ್ ರಝಾ(23), ಜಾಫರ್ ಸಾಧಿಕ್(22), ಮಹಮ್ಮದ್ ರೂಹಿತ್(31) ಹಾಗೂ ನ್ಯಾಮತಿ ತಾಲೂಕಿನ ಹೊಸ ಜೋಗ ಗ್ರಾಮದ ಶಂಕರ ನಾಯ್ಕಎಂದು ತಿಳಿದುಬಂದಿದೆ. ಬಂದಿ ತರ ಬಳಿ 3.1 ಕೆಜಿ ಗಾಂಜಾ ಹಾಗೂ ಮೂರು ಮೊಬೈಲ್ ಮತ್ತು ಎರಡು ಬೈಕ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಈ ಕುರಿತಾದ ಮಾಹಿತಿ ಭಾನುವಾರ ಲಭ್ಯವಾಗಿದೆ.