ಬೆಂಗಳೂರು ಉತ್ತರ: ಶೋಭಾ ಕರಂದ್ಲಾಜೆ ಪೀಣ್ಯಾದಲ್ಲಿ ವಿಕಸಿತ್ ಭಾರತ್ ರೋಜಗಾರ್ ಸಂವಾದದಲ್ಲಿ ಪಾಲ್ಗೊಂಡರು
ಪೀಣ್ಯಾ ಕೈಗಾರಿಕಾ ಸಂಘದ ವತಿಯಿಂದ ಇಂದು ಪೀಣ್ಯಾದಲ್ಲಿ ಆಯೋಜಿಸಲಾದ ಪ್ರಧಾನಮಂತ್ರಿ ವಿಕಸಿತ್ ಭಾರತ್ ರೋಜಗಾರ್ ಯೋಜನೆ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ ಅವರು ಪಾಲ್ಗೊಂಡರು. ದೇಶಕ್ಕೆ ಸ್ವಾತಂತ್ರ್ಯ ಬಂದು 100 ವರ್ಷ ಪೂರೈಸುವ 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ರೂಪಿಸುವ ಗುರಿ ಮತ್ತು ಮಹತ್ವಾಕಾಂಕ್ಷಿ ದೃಷ್ಟಿಕೋನದ ಕುರಿತು ಈ ಸಂವಾದದಲ್ಲಿ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ, ಪೀಣ್ಯಾ ಕೈಗಾರಿಕಾ ಸಂಘದ ಅಧ್ಯಕ್ಷರಾದ ಶ್ರೀ ಡಿ.ವೈ. ದಾನಪ್ಪ, ಮಾಜಿ ಅಧ್ಯಕ್ಷ ಶ್ರೀ ಮಲ್ಲಿಕಾರ್ಜುನ್, ಭವಿಷ್ಯ ನಿಧಿಯ ಪ್ರಾದೇಶಿಕ ಆಯುಕ್ತರು ಶ್ರೀ ಮಿಹಿರ್ ಕುಮಾರ್, ಶ್ರೀ ಬಾಲಕೃಷ್ಣ ನಾಯ್ಕ್, ಶ್ರೀ ಜಸ್ವೀರ್, ಶ್ರೀ ತ್ರಿಲೋಚನ್ ಪ್ರಸಾದ್ ಬರೀಹ, ಶ್ರೀ ವೀರೇಶ್ ಟಿ.ಆ