ಹನೂರು: ಮಹದೇಶ್ವರ ಬೆಟ್ಟದಲ್ಲಿ ನವರಾತ್ರಿ ಉತ್ಸವ: ಉಯ್ಯಾಲೆ ಸೇವೆಯೊಂದಿಗೆ ಭಕ್ತಿ ರಂಜಿತ ಸಂಭ್ರಮ
ಹನೂರು: ತಾಲೂಕಿನಮಹದೇಶ್ವರ ಬೆಟ್ಟದ ಮಾದಪ್ಪನ ದೇಗುಲದಲ್ಲಿ ನವರಾತ್ರಿ ಅಂಗವಾಗಿ ಸೋಮವಾರ ರಾತ್ರಿ ಉಯ್ಯಾಲೆ ಉತ್ಸವ ಭಕ್ತಿಭರಿತವಾಗಿ ನಡೆಯಿತು. ಈ ಕಾರ್ಯಕ್ರಮಕ್ಕೆ ಸಾಲೂರು ಮಠದ ಶ್ರೀ ಡಾ. ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಚಾಲನೆ ನೀಡಿದರು. ಬೇಡಗಂಪಣ ಅರ್ಚಕರಿಂದ ತಳಿರು-ತೋರಣಗಳಿಂದ ಅಲಂಕರಿಸಲಾದ ಉಯ್ಯಾಲೆಗೆ ಶಿವ-ಪಾರ್ವತಿಯ ಮೂರ್ತಿಯನ್ನು ಸ್ಥಾಪಿಸಿ, ವಜ್ರಾಭರಣಗಳಿಂದ ಸಜ್ಜುಗೊಳಿಸಲಾಯಿತು.ಪ್ರತಿ ದಿನ ರಾತ್ರಿ ವೇಳೆ ಮಠಾಧಿಪತಿಗಳ ಸಮ್ಮುಖದಲ್ಲಿ ಉಯ್ಯಾಲೆ ಉತ್ಸವ ನಡೆಯಲಿದೆ.