ಮಳವಳ್ಳಿ: ಬಾಳೆಹೊನ್ನಿಗದಲ್ಲಿ ಕಾಡಾನೆ ದಾಳಿಯಿಂದ ಹಲವಾರು ತೆಂಗಿನ ಗಿಡಗಳು ನಾಶ, ರೈತ ಕಂಗಾಲು
ಕಾಡಾನೆ ದಾಳಿಯಿಂದ ಹಲವಾರು ತೆಂಗಿನ ಗಿಡಗಳು ನಾಶ ಆಗಿರುವ ಘಟನೆ ಮಳವಳ್ಳಿ ತಾಲ್ಲೂಕು ಹಲಗೂರು ಸಮೀಪದ ಬಾಳೆಹೊನ್ನಿಗ ವ್ಯಾಪ್ತಿಯಲ್ಲಿ ನಡೆದಿದೆ. ದಳವಾಯಿ ಕೋಡಿಹಳ್ಳಿ ಗ್ರಾಮದ ರೈತ ಬೋರಯ್ಯ ಅವರು ತಮ್ಮ ಜಮೀನಿನಲ್ಲಿ ಹಿಪ್ಪುನೇರಳೆ ಬೆಳೆಯ ಜೊತೆಗೆ ತೆಂಗಿನ ಸಸಿಗಳನ್ನು ಬೆಳೆಸಿದ್ದರು. ಭೀಮನ ಕಿಂಡಿ ಅರಣ್ಯ ಪ್ರದೇಶದಿಂದ ಆಗಮಿಸಿದ ಒಂಟಿ ಸಲಗ ತೆಂಗಿನ ಸುಳಿಗಳನ್ನು ಕಿತ್ತು ನಾಶಪಡಿಸಿದೆ. ಪಕ್ಕದ ಜಮೀನಿನಲ್ಲಿ ರಾಗಿ ಫಸಲನ್ನು ಸಹ ತಡರಾತ್ರಿ ಹಾನಿಗೊಳಿಸಿದೆ. ಈ ಸಂದರ್ಭದಲ್ಲಿ ರೈತ ಬೋರಯ್ಯ ಮಾತನಾಡಿ, ಕಾಡು ಪ್ರಾಣಿಗಳ ದಾಳಿಯಿಂದ ಫಸಲು ರಕ್ಷಿಸಿಕೊಳ್ಳುವ ಜೊತೆಗೆ ನಮ್ಮ ಜೀವ ರಕ್ಷಣೆ ಮಾಡಿಕೊಳ್ಳಬೇಕಾದ ಆತಂಕ ಎದುರಾಗಿದೆ. ದಿನನಿತ್ಯ ಕಾಡು ಪ್ರಾಣಿಗಳಾದ ಜಿಂಕೆ, ಹಂದಿ ದಾಳಿಯಿಂದ ಫಸಲನ್ನು ಉಳಿಸಿಕೊಳ್ಳುವ ಸವಾಲನ್ನು ಎದುರಿಸ