ರಬಕವಿ-ಬನಹಟ್ಟಿ: ನಾನು ಬಸವಣ್ಣನವರ ಕಟ್ಟಾ ಅನುಯಾಯಿ, ಬಂಡಿಗಣಿ ಗ್ರಾಮದಲ್ಲಿ ಸಿಎಂ ಸಿದ್ಧರಾಮಯ್ಯ
ನಾನು ಬಣವಣ್ಣನವರ ಕಟ್ಟಾ ಅನುಯಾಯಿ ಎಂದು ಸಿಎಂ ಸಿದ್ಧರಾಮಯ್ಯನವರು ಹೇಳಿದ್ದಾರೆ.ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದಲ್ಲಿ ನಡೆದ ವಿಶ್ವಶಾಂತಿಗಾಗಿ ಸರ್ವಧರ್ಮ ಮಹಾಸಂಗಮ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದರು.ನಾವು ಯಾವುದೇ ಜಾತಿ ಧರ್ಮದವರಾಗಿದ್ರು ಪರಸ್ಪರ ಪ್ರೀತಿಸಬೇಕು ಎಂದರು.ಸರ್ವಧರ್ಮಗಳ ಕುರಿತು,ಜ್ಯಾತ್ಯಾತೀತತೆ ಕುರಿತು ಅಮೇಕ ವಿಚಾರಗಳನ್ನ ಹಂಚಿಕೊಂಡು ಮಾತನಾಡಿದರು.ಕಾರ್ಯಕ್ರಮದಲ್ಲಿ ಸಚಿವ ತಿಮ್ಮಾಪೂರ್, ಶಾಸಕ ಕಾಶಪ್ಪನವರ್, ಬಂಡಿಗಣಿ ಮಠದ ದಾನೇಶ್ವರ ಶ್ರೀ,ವಿವಿಧ ಮಠಗಳ ಮಠಾಧೀಶರು,ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.