ನೆಲಮಂಗಲ: ತಾಲೂಕಿನ ಲಕ್ಕಸಂದ್ರ ಗ್ರಾಮದ ಸರಕಾರಿ ಶಾಲೆಯಲ್ಲಿ ಅರ್ಥಪೂರ್ಣ ಶಾಲಾ ವಾರ್ಷಿಕೋತ್ಸವ ಯಶಸ್ವಿ.
ತ್ಯಾಮಗೊಂಡ್ಲು ಹೋಬಳಿಯ ಗಡಿ ಗ್ರಾಮವಾದ ಲಕ್ಕಸಂದ್ರ ಸರಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯ ಹಳೆಯ ವಿದ್ಯಾರ್ಥಿಗಳು ಮತ್ತು ಗ್ರಾಮದ ಹಿರಿಯರ ಸಹಕಾರದಿಂದ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಅದ್ದೂರಿಯಾಗಿ ಶಾಲಾ ವಾರ್ಷಿಕೋತ್ಸವ ನಡೆಸಿದರು. ಈ ವಾರ್ಷಿಕೋತ್ಸವ ಕಾರ್ಯಕ್ರಮ ಗ್ರಾಮದಲ್ಲಿ ಹಬ್ಬದಂತೆ ಆಚರಿಸಿದ್ದಾರೆ, ಲಕ್ಕಸಂದ್ರ ಗ್ರಾಮದ ಹಿರಿಯರು ಹಳೆಯ ವಿದ್ಯಾರ್ಥಿಗಳು, ಎಸ್.ಡಿ.ಎಂ.ಸಿ. ಸಹಕಾರ ಅತೀಮುಖ್ಯವಾಗಿದೆ, ಸರಕಾರಿ ಶಾಲೆಯಲ್ಲಿ ಉತ್ತಮ ಅಂಕಗಳಿಸಿದ ಶಿಕ್ಷಕರಿರುತ್ತಾರೇ ಅವರನ್ನು ಗ್ರಾಮಸ್ಥರು ಬಳಸಿಕೊಳ್ಳಬೇಕು ಎಂದರು