ಈಜಲು ಹೋದ ಇಬ್ಬರು ಬಾಲಕರ ಸಾವು ಬಸವಕಲ್ಯಾಣ: ದನಗಳಿಗೆ ಹುಲ್ಲು ಮೇಯಿಸಲೆಂದು ಅಡವಿಗೆ ಹೋದ ಇಬ್ಬರು ಬಾಲಕರು ಹೊಂಡದ ನೀರಿನಲ್ಲಿ ಈಜಾಡಲು ಹೋಗಿ ಮೃತಪಟ್ಟ ಘಟನೆ ತಾಲೂಕಿನ ರಾಂಪೂರವಾಡಿ ಗ್ರಾಮದಲ್ಲಿ ಜರುಗಿದೆ. ಗ್ರಾಮದ ನಿವಾಸಿಗಳಾದ ಮೈಲಾರಿ ದೊಡ್ಮನಿ (10) ಹಾಗೂ ಶರಣಪ್ಪ ಹಾಳಗೋರ್ಟೆ (10) ಹೊಂಡದ ನೀರಿನಲ್ಲಿ ಮುಳುಗಿ ಮೃತಪಟ್ಟ ಬಾಲಕರಾಗಿದ್ದಾರೆ. ಭಾನುವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಗ್ರಾಮದ ವ್ಯಾಪ್ತಿಯ ಜಮೀನಿನಲ್ಲಿ ದನಗಳನ್ನು ಮೆಯಿಸಲೆಂದು ಹೋದ ಇವರು ಜಮೀನಿನಲ್ಲಿ ಇರುವ ನೀರಿನ (ಸಿಡಿಲು ಗುಂಡ) ಹೊಂಡಲದಲ್ಲಿ ಈಜಾಡಲೆಂದು ತೆರಳಿದ್ದು, ಈ ವೇಳೆ ಹೊಂಡದ ನೀರಿನಲ್ಲಿ ಸಿಲುಕಿ ಮೇಲೆ ಬರಲಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.