ಹನೂರು: ಗುಂಡ್ಲುಪೇಟೆ ಅಂಗಡಿಗಳಲ್ಲಿ ಕನ್ನಡ ಉಲ್ಲೇಖದ ಕೊರತೆ: ಕರ್ನಾಟಕ ಕಾವಲು ಪಡೆ ಆಕ್ರೋಶ
ಗುಂಡ್ಲುಪೇಟೆ: ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಮಾರ್ಗದಲ್ಲಿರುವ ಸುಲ್ತಾನ್ ಬತ್ತೇರಿ ರಸ್ತೆಯ ಕೆಲ ಅಂಗಡಿಗಳ ನಾಮಫಲಕಗಳಲ್ಲಿ ಸಂಪೂರ್ಣವಾಗಿ ಆಂಗ್ಲ ಭಾಷೆ ಬಳಸಿರುವುದನ್ನು ಕರ್ನಾಟಕ ಕಾವಲು ಪಡೆ ಸಂಘಟನೆ ಖಂಡಿಸಿದೆ. ಈ ಹಿನ್ನೆಲೆಯಲ್ಲಿ ಸಂಘಟನೆಯ ಸದಸ್ಯರು ಸ್ಥಳದಲ್ಲಿ ಪ್ರತಿಭಟನೆ ನಡೆಸಿ, ಅಂಗಡಿಕಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಕಾವಲು ಪಡೆಯ ತಾಲ್ಲೂಕು ಅಧ್ಯಕ್ಷ ಎ. ಅಬ್ದುಲ್ ಮಾಲಿಕ್ ಮಾತನಾಡಿ, "ಗುಂಡ್ಲುಪೇಟೆ ರಾಜ್ಯದ ಗಡಿಭಾಗವಾಗಿದ್ದು ಇಲ್ಲಿನ ಯಾವುದೇ ನಾಮಫಲಕದಲ್ಲಿ ಕನಿಷ್ಠ ಶೇಕಡಾ 60 ರಷ್ಟು ಕನ್ನಡ ಭಾಷೆ ಬಳಸಬೇಕೆಂಬ ಸರ್ಕಾರದ ನಿಯಮವಿದೆ. ಇದನ್ನು ಎಲ್ಲರೂ ಪಾಲಿಸಬೇಕು," ಎಂದು ಹೇಳಿದ್ದಾರೆ.