ಅವಲಹಳ್ಳಿ ಪೊಲೀಸರು ಬುಧವಾರ, ನ. 22 ರಂದು ರಾತ್ರಿ ವೈಟ್ಫೀಲ್ಡ್ ಬಳಿ 300 ಗ್ರಾಂ ಚಿನ್ನಾಭರಣ ಕಳ್ಳತನ ಮಾಡಿದ್ದ ಇಸಾಯಿ ರಾಜ್ ಎಂಬ ಕಳ್ಳನನ್ನೇ ದೋಚಿದ್ದ ಖತರ್ನಾಕ್ ಗ್ಯಾಂಗ್ ಅನ್ನು ಬಂಧಿಸಿದ್ದಾರೆ. ಮಂಡೂರು ಸ್ಮಶಾನ ಬಳಿ ಎಣ್ಣೆ ಹೊಡೆಯುತ್ತಿದ್ದ ಗ್ಯಾಂಗ್, ಕಳ್ಳನ ಹೆದರಿಸಿ ವಸ್ತುಗಳನ್ನು ದೋಚಿದ್ದರು. ಮೌನೇಶ್ ರಾವ್, ದರ್ಶನ್ ಅಲಿ ಅಲಿಯಾಸ್ ಅಪ್ಪು, ಚಂದನ್, ಸುನಿಲ್ ಎಂಬುವರನ್ನು ಪೊಲೀಸರು ಬಂಧಿಸಿದ್ದು, ಕಳ್ಳ ಮತ್ತು ಗ್ಯಾಂಗ್ನಿಂದ 70 ಲಕ್ಷ ರೂ. ಮೌಲ್ಯದ 447 ಗ್ರಾಂ ಚಿನ್ನಾಭರಣ ಹಾಗೂ 28 ಸಾವಿರ ರೂ. ನಗದು ವಶಪಡಿಸಿಕೊಳ್ಳಲಾಗಿದೆ.