ಸಿರವಾರ: ಅತ್ತನೂರು 2 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸಚಿವರಿಂದ ಚಾಲನೆ
ಹೆಚ್ಚಿನ ಜನಸಂಪರ್ಕ ಹೊಂದಿರುವ ಗ್ರಾಮೀಣ ಭಾಗದ ರಸ್ತೆಗಳನ್ನು ಅಭಿವೃದ್ಧಿಗೊಳಿಸಲು ಮೊದಲ ಆದ್ಯತೆ ಮೂಲಕ ಅನುದಾನ ನೀಡಲಾಗುತ್ತಿದೆ ಎಂದು ಭಾನುವಾರ 12 ಗಂಟೆಗೆ ಸಚಿವ ಎನ್ ಎಸ್ ಭೋಸರಾಜು ಕಾಮಗಾರಿಗೆ ಚಾಲನೆ ನೀಡಿ ಮಾತನಾಡುತ್ತಾ, ಅತ್ತನೂರು ನಿಂದ ಬೊಮ್ಮನಾಳ ಗ್ರಾಮ ಸಂಪರ್ಕಿಸುವ ಮುಧೋಳ ಯರಗೇರಾ ರಾಜ್ಯ ಹೆದ್ದಾರಿ 127 ರ ಕಿಮಿ 146 ರಿಂದ 161 ರವರೆಗೆ ಅಪೆಂಡಿಕ್ಸ್ ಯೋಜನೆ ಅಡಿಯಲ್ಲಿ 2 ಕೋಟಿ ವೆಚ್ಚದ ಡಾಂಬರಿಕರಣ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರು ಚರಂಡಿ ರಸ್ತೆ ಸುಧಾರಣೆ ಸೇರಿದಂತೆ ಜನರ ಬೇಡಿಕೆಗೆ ಅನುಗುಣವಾಗಿ ನಿರಂತರ ಪ್ರಯತ್ನಿಸುತ್ತಿದ್ದೇವೆ ಎಂದರು.