ಕಲಬುರಗಿ: ಆರ್‌ಎಸ್‌ಎಸ್ ಪಥಸಂಚಲನ ಅರ್ಜಿ ಮುಂದೂಡಿದ ಕಲಬುರಗಿ ಹೈಕೋರ್ಟ್: ಅ24 ರಂದು ಅರ್ಜಿ ವಿಚಾರಣೆ
ಕಲಬುರಗಿ : ಚಿತ್ತಾಪುರ ಪಟ್ಟಣದಲ್ಲಿ ಆರ್‌ಎಸ್‌ಎಸ್ ಪಥಸಂಚಲನಕ್ಕೆ ಅನುಮತಿ ನೀಡುವಂತೆ ಆರ್‌ಎಸ್‌ಎಸ್ ಕಲಬುರಗಿ ಹೈಕೋರ್ಟ್ ಮೆಟ್ಟಿಲೇರಿತ್ತು.. ಅದರಂತೆ ಅ19 ರಂದು ಬೆಳಗ್ಗೆ 9.30 ಕ್ಕೆ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಹೈಕೋರ್ಟ್, ವಿಚಾರಣೆಯನ್ನ ಅಕ್ಟೋಬರ್ 24 ರಂದು ಮಧ್ಯಾನ 2.30 ಕ್ಕೆ ಮುಂದೂಡಿ ಆದೇಶ ಹೊರಿಡಿಸಿದೆ.. ಅಲ್ಲದೇ ನ2 ರಂದು ನಾವು ಚಿತ್ತಾಪುರದಲ್ಲಿ ಪಥಸಂಚಲನ ನಡೆಸೋದಕ್ಕೆ ಅನುಮತಿ ಕೊಡಿ ಅಂತಾ ಮಾಡಿದ ಮನವಿ ಪುರಸ್ಕರಿಸಿದ ಹೈಕೋರ್ಟ್, ಪಥಸಂಚಲನದಲ್ಲಿ ಯಾರ್ಯಾರು ಭಾಗಿಯಾಗ್ತಾರೆ, ಮಾರ್ಗದ ಬಗ್ಗೆ ವಿವರವಾಗಿ ಡಿಸಿಗೆ ಅರ್ಜಿ ಸಲ್ಲಿಸುವಂತೆ ಸೂಚಿಸಿದೆ.