ಕಾರವಾರ: ನಗರದ ಟನಲ್ ನಲ್ಲಿ ಜಾನುವಾರಿಗೆ ಡಿಕ್ಕಿ ಹೊಡೆದ ಅಪರಿಚಿತ ವಾಹನ: ಆಕಳಿಗೆ ಗಂಭೀರ ಗಾಯ
ನಗರದ ಟನಲ್ ನಲ್ಲಿ ಅಪರಿಚಿತ ವಾಹನವೊಂದು ಆಕಳಿಗೆ ಡಿಕ್ಕಿ ಹೊಡೆದ ಪರಿಣಾಮ ಆಕಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬುಧವಾರ ಸಂಜೆ 6:30 ವೇಳೆ ಸಂಭವಿಸಿದೆ. ಟನಲ್ ಒಳಭಾಗದಲ್ಲಿ ಆಗಾಗ ಜಾನುವಾರು ಪ್ರವೇಶ ಮಾಡುತ್ತಿದ್ದು ಸಂಬಂಧಪಟ್ಟ ಇಲಾಖೆಯವರು, ಜನರ ಸುರಕ್ಷತೆಗಾಗಿ ಈ ಬಗ್ಗೆ ಕ್ರಮ ಕೈಗೊಳ್ಳಬೇಕಾಗಿದೆ.