ಹುಮ್ನಾಬಾದ್: ನಗರದಲ್ಲಿ ಬಿಎಸ್ಎನ್ಎಲ್ ವತಿಯಿಂದ ಬಿಎಸ್ಎನ್ಎಲ್ ಬೆಳ್ಳಿ ಹಬ್ಬ ಹಿನ್ನೆಲೆ ಅಧಿಕಾರಿ ಸಿಬ್ಬಂದಿಯಿಂದ ಕಾಲ್ನಡಿಗೆ ಜಾಥಾ
ಬಿಎಸ್ಎನ್ಎಲ್ ಆರಂಭಗೊಂಡು ಬರೊಬರಿ 25 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ನಗರದಲ್ಲಿ ಬಿಎಸ್ಎನ್ಎಲ್ ಅಧಿಕಾರಿ, ಸಿಬ್ಬಂದಿ ಬುಧವಾರ ಮಧ್ಯಾಹ್ನ 1ಕ್ಕೆನಡೆದ ಕಾರ್ಯಕ್ರಮ ಕುರಿತು ಜನರಲ್ಲಿ ಜಾಗೃತಿ ಮೂಡಿಸಿದರು. ಈ ವೇಳೆ ಉಪ ವಿಭಾಗ ಇಂಜಿನಿಯರ ಕೆ ಶರತ್ ಮಾತನಾಡಿದರು. ಸಹಾಯಕ ಎಂಜಿನಿಯರ್ ಕೀರ್ತಿ ಕಿರಣ, ತಾಂತ್ರಿಕ ತಂತ್ರಜ್ಞ ಕಾಶಿಂದ, ಚಂದ್ರಕಾಂತ, ಹುಸೇನಿ, ತುಕಾರಾಂ, ದೇವೇಂದ್ರ ಕಾಂಬಳೆ, ಭರತ್ ಪಾಟೀಲ, ಸೂರ್ಯಕಾಂತ, ಮಲ್ಲಪ್ಪ, ನಾರಾಯಣ ಇದ್ದರು.