ಹಾಸನ: ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಸಾಮಾನ್ಯ ಸಭೆ : ಅಭಿವೃದ್ಧಿ ವಿಚಾರವಾಗಿ ಸದಸ್ಯರ ಗದ್ದಲ
Hassan, Hassan | Oct 6, 2025 ಹಾಸನ: ಹಾಸನ ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಇಂದು ಮೇಯರ್ ಗಿರೀಶ್ ಚನ್ನವೀರಪ್ಪ ಅವರ ಅಧ್ಯಕ್ಷತೆಯಲ್ಲಿ ಇಂದು ಸಾಮಾನ್ಯ ಸಭೆ ನಡೆಯಿತು. ಸಭೆಯ ಆರಂಭದಲ್ಲಿ ಮಲ್ನಾಡ್ ಇಂಜಿನಿಯರಿಂಗ್ ಕಾಲೇಜ್ ಸೂಪರ್ದ್ದಿಯಲ್ಲಿರುವ ಮಹಾನಗರ ಪಾಲಿಕೆಯ ಜಾಗವನ್ನು ವಶಕ್ಕೆ ಪಡೆಯಬೇಕು, ಅಲ್ಲದೆ ಅಲ್ಲಿನ ವಾಣಿಜ್ಯ ಮಳಿಗೆಗಳಿಗೆ ನೀಡಲಾಗಿರುವ ತೆರಿಗೆ ವಿನಾಯಿತಿಯನ್ನು ನಿರ್ಬಂಧಿಸಿ ಇಲ್ಲಿಯವರೆಗೂ ಬರಬೇಕಾಗಿರುವ ಎಲ್ಲಾ ತೆರಿಗೆಯನ್ನು ಕೂಡಲೇ ಪಾವತಿ ಮಾಡಲು ನೋಟೀಸ್ ನೀಡಬೇಕು ಎಂದು ಕೆಲ ಸದಸ್ಯರು ಒತ್ತಾಯಿಸಿದರು.