ಮಳವಳ್ಳಿ: ಪಟ್ಟಣದಲ್ಲಿ ಟಿಎಪಿಸಿಎಂಎಸ್ ನ ನೂತನ ಅಧ್ಯಕ್ಷ ಉಪಾಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಲಿಂಗರಾಜು, ಮಾಲಾಶ್ರೀ ಆಯ್ಕೆ
ಮಳವಳ್ಳಿ : ತಾಲ್ಲೂಕು ಟಿಎಪಿಸಿಎಂಎಸ್ ನ ನೂತನ ಅಧ್ಯಕ್ಷರಾಗಿ ಎಂ ಲಿಂಗರಾಜು, ಉಪಾಧ್ಯಕ್ಷರಾಗಿ ಎಸ್ ಮಾಲಾಶ್ರೀ ಆಯ್ಕೆಯಾಗಿದ್ದಾರೆ. ಕಳೆದ 29 ರಂದು ಟಿಎಪಿಸಿಎಂ ಎಸ್ ನ 16 ಮಂದಿ ನಿರ್ಧೇಶಕರ ಆಯ್ಕೆಗಾಗಿ ಚುನಾವಣೆ ನಡೆದು ಇದರಲ್ಲಿ 8 ಮಂದಿ ಕಾಂಗ್ರೆಸ್ ಬೆಂಬಲಿಗರು 5 ಮಂದಿ ಜೆಡಿಎಸ್ ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿಗಳು ಹಾಗೂ ಒಬ್ಬರು ಪಕ್ಷೇತರರು ಆಯ್ಕೆಯಾಗಿದ್ದರು. ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಗಾಗಿ ಶುಕ್ರವಾರ ಮಧ್ಯಾಹ್ನ 4 ಗಂಟೆ ಸಮಯದಲ್ಲಿ ಚುನಾವಣೆ ನಿಗಧಿಯಾಗಿತ್ತು.