ರಾಮನಗರ: ನಗರದ ಬಸ್ ನಿಲ್ದಾಣದಲ್ಲಿ ನಗರ ಸಾರಿಗೆ ಬಸ್ ಸಂಚಾರಕ್ಕೆ ಚಾಲನೆ
ನಗರ ವ್ಯಾಪ್ತಿಯಲ್ಲಿ ಸಾರಿಗೆ ಬಸ್ ಸಂಚಾರಕ್ಕೆ ಚಾಲನೆಯನ್ನು ನೀಡಲಾಯಿತು. ರಾಮನಗರದ ಸಾರಿಗೆ ಬಸ್ ನಿಲ್ದಾಣದಲ್ಲಿ ಸಾರಿಗೆ ಇಲಾಖೆ ಸಚಿವರಾದಂತ ರಾಮಲಿಂಗಾರೆಡ್ಡಿ ಅವರು ಸೋಮವಾರ ಚಾಲನೆ ನೀಡಿದ್ರು. ಇದಾದ ನಂತರ ಬಮೂಲ್ ಅಧ್ಯಕ್ಷ ಡಿ ಕೆ ಸುರೇಶ್ ಹಾಗೂ ಶಾಸಕರು ನಗರ ಸಾರಿಗೆ ಬಸ್ ನಲ್ಲಿ ನಗರದ ಸುತ್ತ ಪ್ರಯಾಣವನ್ನು ಮಾಡಿದರು.