ಬೆಂಗಳೂರು ಹೊರವಲಯದ ಆನೇಕಲ್ ಉಪವಿಭಾಗದ ಜಿಗಣಿಯಲ್ಲಿ ಆನೆದಂತದಿಂದ ತಯಾರಿಸಿದ ವಿಗ್ರಹಗಳ ಅಕ್ರಮ ಮಾರಾಟ ಜಾಲವನ್ನು ಜಿಗಣಿ ಪೊಲೀಸರು ಪತ್ತೆ ಹಚ್ಚಿದ್ದಾರೆ. ಖಚಿತ ಮಾಹಿತಿ ಮೇರೆಗೆ ಕೊಪ್ಪ ಗೇಟ್ ಸಮೀಪ ದಾಳಿ ನಡೆಸಿದ ಪೊಲೀಸರು, ಮೊಹಮ್ಮದ್ ಶಬೀರ್ ಅಹಮದ್ (50) ಮತ್ತು ನರೇಂದ್ರ ಶರ್ಮಾ (45) ಎಂಬ ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರಿಂದ 120 ವರ್ಷಕ್ಕೂ ಹಳೆಯದಾಗಿರಬಹುದಾದ, 20 ಲಕ್ಷ ರೂ.ಕ್ಕೂ ಹೆಚ್ಚು ಮೌಲ್ಯದ ಆನೆದಂತದ ರಾಧೆ-ಕೃಷ್ಣ ವಿಗ್ರಹಗಳು ಹಾಗೂ ಬೈಕ್ ವಶಕ್ಕೆ ಪಡೆಯಲಾಗಿದೆ. ಇನ್ಸ್ಪೆಕ್ಟರ್ ಮಂಜುನಾಥ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದ್ದು