ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಅವರು ನೀಡಿದ್ದ ಮನರೇಗಾ ವಿಚಾರದ ಹೇಳಿಕೆಗೆ ಚಿತ್ರದುರ್ಗದಲ್ಲಿ ಸಚಿವ ಎಂ.ಬಿ.ಪಾಟೀಲ್ ತಿರುಗೇಟು ನೀಡಿದ್ದಾರೆ. ಕಳೆದ ಎರಡು ದಿನಗಳ ಕಾಲ ಸಚಿವ ಸಂಪುಟ ಸಭೆ ಕರೆದಿದ್ದು ನರೇಗಾದಲ್ಲಿ ಏನು ಭ್ರಷ್ಟಾಚಾರ ಆಗುದೆ ಅಂತಾ ವಿಜಯೇಂದ್ರ ಹೇಳಲಿ ಎಂದು ಸವಾಲ್ ಹಾಕಿದರು. ನರೇಗಾದಲ್ಲಿ ಏನಿತ್ತು..? ಇವರ ಹೊಸ ಯೋಜನೆಯಲ್ಲಿ ಏನಿದೆ.?ಸಚಿವ ಸಂಪುಟ ಸಭೆಯಲ್ಲಿ ಎಳೆ ಎಳೆಯಾಗಿ ಬಿಚ್ಚಿಡ್ತೀವಿ, ನರೇಗಾದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದ ಬಿ.ವೈ ವಿಜಯೇಂದ್ರಗೆ MB ಪಾಟೀಲ್ ಟಾಂಗ್ ನೀಡಿದರು. ಅವಾಗಾ ವಿಜಯೇಂದ್ರ ಉತ್ತರ ಕೊಡಲಿ ಎಂದರು.