ಲಕ್ಷ್ಮೇಶ್ವರ: ಜಂಗಳ ಕೆರೆಗೆ ಶಾಶ್ವತ ರಸ್ತೆ ನಿರ್ಮಾಣಕ್ಕೆ ರೈತರ ಆಗ್ರಹ#localissue
ಲಕ್ಷೇಶ್ವರದಿಂದ ಜಂಗಳಕೆರೆ ರಸ್ತೆ ಸಂಪೂರ್ಣ ಹದಗೆಟ್ಟು ರೈತರಿಗೆ ಓಡಾಡುವುದಕ್ಕೆ ತೊಂದರೆ ಆಗುತ್ತಿತ್ತು. ಇದರಿಂದ ಸುಮಾರು 3 ಕಿ.ಮೀ. ರಸ್ತೆಯನ್ನು 200 ಮಂದಿ ರೈತರು ಒಟ್ಟಾಗಿ ಒಬ್ಬರಂತೆ 1000 ರೂಪಾಯಿ ಹಾಕಿ ರಸ್ತೆ ನಿರ್ಮಾಣ ಮಾಡಿದ್ದಾರೆ. ಆದರೆ ಸುಂದರವಾದ ರಸ್ತೆ ನಿರ್ಮಾಣ ಮಾಡುವಂತೆ ಹಲವು ಬಾರಿ ಮನವಿ ನೀಡಿದರು. ಯಾವುದೇ ರೀತಿಯ ಪ್ರಯೋಜನ ಆಗಿಲ್ಲ. ಮುಂಗಾರು ಆರಂಭವಾದ ಹಿನ್ನೆಲೆಯಲ್ಲಿ ಜಮೀನಿಗೆ ಹೋಗಲು ದಾರಿ ಇಲ್ಲಿದ ಕಾರಣ ತಾತ್ಕಾಲಿಕವಾಗಿ ರಸ್ತೆ ನಿರ್ಮಾಣ ಮಾಡಲಾಗಿದೆ. ಮಳೆ ಆರಂಭಾದರೆ ಮತ್ತೆ ರಸ್ತೆ ಕಡೆತುತ್ತದೆ. ಕೂಡಲೇ ರಸ್ತೆ ನಿರ್ಮಾಣ ಮಾಡುವಂತೆ ಒತ್ತಾಯಿಸಿದರು.