ಲಕ್ಷ್ಮೇಶ್ವರ: ಸರ್ಕಾರದ ನಿರ್ಲಕ್ಷ, ಜಂಗಲಕೇರಿ ರಸ್ತೆ ನಿರ್ಮಾಣ ಮಾಡಿದ ರೈತರು
ಜಿಲ್ಲೆಯಲ್ಲಿ ಮುಂಗಾರು ಮಳೆ ಉತ್ತಮವಾಗಿ ಆಗುತ್ತಿರುವುದರಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಆದರೆ, ಜಿಲ್ಲೆಯ ಲಕ್ಷ್ಮೇಶ್ವರದಿಂದ ಜಂಗಲಕೆರೆ ರೈತ ಸಂಪರ್ಕ ರಸ್ತೆ ಸಂಪೂರ್ಣ ಹಾಳಾಗಿದ್ದರಿಂದ ಹಲವಾರು ಭಾರಿ ತಹಶೀಲ್ದಾರರಿಗೆ ಹಾಗೂ ಡಿಸಿಯವರಿಗೆ ಮನವಿ ಸಲ್ಲಿಸಿದರೂ ಪ್ರಯೋಜವಾಗಿರಲಿಲ್ಲ. ಇದನ್ನು ಮನಗೊಂಡ ರೈತರು ತಾವೇ ಒಬ್ಬರಂತೆ 1000 ರೂ.ಗಳನ್ನು ಹಾಕಿ ರಸ್ತೆ ಮಣ್ಣನ್ನು ಹಾಕಿಸಿದ್ದು, ಇದಕ್ಕೆ ಶಾಸಕ ಡಾ.ಚಂದ್ರು ಲಮಾಣಿಯವರು ಸಾಥ್ ನೀಡಿದ್ದಾರೆ.