ಮಳವಳ್ಳಿ: ಕಂದೇಗಾಲದಲ್ಲಿ ಮಗನಿಗೆ ತೊಂದರೆ ನಿವಾರಣೆಗೆ ಕುಡಿಕೆ ಮಾಡಿಕೊಡುವುದಾಗಿ ಬುಡುಬುಡಿಕೆಯೊಬ್ಬ 12 ಚಿನ್ನದ ಕಾಸು ಅಪಹರಣ
ಮಗನಿಗೆ ತೊಂದರೆ ನಿವಾರಣೆಗೆ ಕುಡಿಕೆ ಮಾಡಿಕೊಡುವುದಾಗಿ ಬುಡುಬುಡಿಕೆಯೊಬ್ಬ 12 ಚಿನ್ನದ ಕಾಸು ಲಪಟಾಯಿಸಿರುವ ಘಟನೆ ಕಂದೇಗಾಲದಿಂದ ವರದಿಯಾಗಿದೆ. ಈ ಕುರಿತು ಮೂಗೀರೆಗೌಡ ಎಂಬುವವರು ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರುದಾರರ ತಾಯಿ ಮನೆಯಲ್ಲಿ ಇದ್ದಾಗ ಆಗಮಿಸಿದ ಬುಡುಬುಡಿಕೆ ನಿಮ್ಮ ಮಗನಿಗೆ ತೊಂದರೆಯಿದ್ದು, ನಾನು ಕುಡಿಕೆ ಮಾಡಿಕೊಡುತ್ತೇನೆ ಎಂದು ನಂಬಿಸಿ ಜೊತೆಯಲ್ಲಿ ತಂದಿದ್ದ ಕುಡಿಕೆಗೆ ಕರಿಮಣಿ ಸರ, ಚಿನ್ನದ ಕಾಸು ಗುಂಡುಗಳನ್ನು ಹಾಕಿಸಿ ಪೂಜೆ ಸಲ್ಲಿಸಿ ಅಕ್ಕಿ ಪಡೆದುಕೊಂಡು ಸಂಜೆ ಕುಡಿಕೆ ತೆರೆಯಲು ತಿಳಿಸಿ ಹೋಗಿದ್ದಾರೆ. ಸಂಜೆ ಕುಡಿಕೆ ತೆರೆದಾಗ ಮೋಸ ಹೋಗಿರುವುದು ಗೊತ್ತಾಗಿದೆ. ಘಟನೆ ಸಂಬಂಧ ಬುಡುಬುಡಿಕೆ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಎಸ್ಪಿ ಕಚೇರಿ ಮಾಹಿತಿ ನೀಡಿದೆ.