ಮೈಸೂರು: ದಸರಾ ಗಜ ಪಡೆಗಳಿಗೆ ಇಂದಿನಿಂದ ವಸ್ತುಪ್ರದರ್ಶನದ ಆವರಣದಲ್ಲಿ ಫಿರಂಗಿ ಸಿಡಿಮದ್ದು ತಾಲಿಮೂ ಆರಂಭ
Mysuru, Mysuru | Sep 15, 2025 ನಾಡಹಬ್ಬ ಮೈಸೂರು ದಸರಾ ಮಹೋತ್ಸವ 2025. ಇಂದು ಗಜಪಡೆಗೆ ಮೊದಲ ಸಿಡಿಮದ್ದು ತಾಲೀಮು. ದಸರಾ ವಸ್ತು ಪ್ರದರ್ಶನ ಮೈದಾನದ ವಾಹನಗಳ ನಿಲುಗಡೆ ಸ್ಥಳದಲ್ಲಿ ತಾಲೀಮು. ವಸ್ತು ಪ್ರದರ್ಶನ ಮೈದಾನಕ್ಕೆ ಆಗಮಿಸಿದ ಗಜಪಡೆಗೆ ಪೂರ್ಣಕುಂಭ ಸ್ವಾಗತದ ಮೂಲಕ ಗಜಪಡೆ ಪೂಜೆ ಸಲ್ಲಿಸಿದ ವಸ್ತು ಪ್ರದರ್ಶನ ಪ್ರಾಧಿಕಾರ. ಸಿಡಿಮದ್ದು ತಾಲೀಮಿನಲ್ಲಿ ಎಲ್ಲಾ 14 ಆನೆಗಳು,ಆಶ್ವರೋಹಿ ದಳ ಭಾಗಿ. ಇದೇ ಮೊದಲ ಬಾರಿ ಸಿಡಿಮದ್ದು ತಾಲೀಮಿನಲ್ಲಿ ಭಾಗವಹಿಸುತ್ತಿರುವ ಹೇಮಾವತಿ, ರೂಪ ಮತ್ತು ಶ್ರೀಕಂಠ ಆನೆಗಳು. ಸಿಡಿಮದ್ದು ತಾಲೀಮು ಫೈರಿಂಗ್ ಕಾರ್ಯದಲ್ಲಿ ಸುಮಾರು 30 ಕ್ಕೂ ಹೆಚ್ಚು ಸಿಎಆರ್ ಪೋಲಿಸರು ಭಾಗಿ. ಸಿಡಿಮದ್ದಿನ ಸದ್ದಿಗೆ ಬೆದರಿದ ಶ್ರೀಕಂಠ,ಹೇಮಾವತಿ ಆನೆಗಳು ಮತ್ತು ಅಶ್ವಾರೋಹಿ ದಳ.