ಮಳವಳ್ಳಿ: ತಾಲ್ಲೂಕಿನ ಪೂರಿಗಾಲಿ ಗ್ರಾಮದ ಆರ್ಟಿಸಿ ಜಮೀನಿನಲ್ಲಿ ನಿರ್ಮಾಣವಾಗುತ್ತಿದ್ದ ಮೊಬೈಲ್ ಟವರ್ನನ್ನು ತಾಲ್ಲೂಕು ಹಾಗೂ ಗ್ರಾ.ಪಂ ಅಧಿಕಾರಿಗಳು ತೆರವು ಗೊಳಿಸಲು ಮುಂದಾಗಿರುವುದು ಅಧಿಕಾರಿಗಳು ರೈತರ ಮೇಲೆ ನಡೆಸುತ್ತಿರುವ ದಬ್ಬಾಳಿಕೆ ಪ್ರವೃತ್ತಿಗೆ ಸಾಕ್ಷಿ ಎಂದು ರಾಜ್ಯ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಎಂ. ಕರಿಯಪ್ಪ ಅಧಿಕಾರಿಗಳ ಕ್ರಮವನ್ನು ಖಂಡಿಸಿದ್ದಾರೆ. ಮಳವಳ್ಳಿ ಪಟ್ಟಣದ ರೈತ ಸಂಘದ ಕಚೇರಿಯಲ್ಲಿ ಗುರುವಾರ ಸಾಯಂ ಕಾಲ 6 ಗಂಟೆ ಸಮಯದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು ರೈತ ಸಂಘದ ಉಪಾಧ್ಯಕ್ಷ ಮಲ್ಲಪ್ಪ ಅವರು ಪೂರಿಗಾಲಿಯ ತಮ್ಮ ಜಮೀನಿನಲ್ಲಿ ಟವರ್ ನಿರ್ಮಾಣ ಮಾಡಲು ಖಾಸಗಿ ಕಂಪನಿಗೆ ಗುತ್ತಿಗೆಗೆ ನೀಡಿದ್ದು ಟವರ್ ನಿರ್ಮಾಣ ಕಾಮಗಾರಿ ಶೇ 90 ರಷ್ಟು ಮುಗಿದಿತ್ತು ಎಂದಿದ್ದಾರೆ.