ರಾಯಚೂರು ನಿಂದ ದಿನ್ನಿ ಗ್ರಾಮಕ್ಕೆ ಹೋಗುತ್ತಿದ್ದ ಸಾರಿಗೆ ಬಸ್ ಒಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಇಳಿದ ಘಟನೆ ಜರುಗಿದೆ. ಮಂಗಳವಾರ 1 ಗಂಟೆ 30 ನಿಮಿಷಕ್ಕೆ ಘಟನೆ ನಡೆದಿದೆ. ರಾಚೂರಿನಿಂದ ದಿನ್ನಿ ಗ್ರಾಮಕ್ಕೆ ಹೋಗುತ್ತಿದ್ದ ಬಸ್ಸಿನಲ್ಲಿ ಸುಮಾರು 40 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೇರಿ ಹಲವು ಪ್ರಯಾಣಿಕರಿದ್ದರು, ಮಮದಾಪೂರ ಗ್ರಾಮದ ಬಳಿ ತೆರಳುತ್ತಿದ್ದಾಗ ಘಟನೆ ಜರುಗಿದೆ. ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಅಹಿತಕರ ಘಟನೆ ಜರುಗಿಲ್ಲ.