ಚಿತ್ರದುರ್ಗ ನಗರದ ಜೋಗಿಮಟ್ಟಿ ರಸ್ತೆಯ ಜಟ್ಪಟ್ ನಗರದ ಮಾರಮ್ಮ ದೇವಸ್ಥಾನದ ಹಿಂಭಾಗದ ನಿವಾಸಿ ರುಕ್ಮಿಣಿ ಗಂಡ ಮಂಜುನಾಥ್ (20) ಎಂಬ ಮಹಿಳೆ 2025ರ ಡಿ.30ರಂದು ಕಾಣೆಯಾಗಿರುವ ಪ್ರಕರಣ ಚಿತ್ರದುರ್ಗ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಕಾಣೆಯಾದ ಮಹಿಳೆಯ ಚಹರೆ ಇಂತಿದೆ. ಕಪ್ಪು ಬಣ್ಣ, ದುಂಡುಮುಖ, ದಪ್ಪ ಮೈಟ್ಟು, ಸುಮಾರು 4.8 ಅಡಿ ಎತ್ತರವಿದ್ದು, ಕನ್ನಡ ಭಾಷೆ ಮಾತನಾಡುತ್ತಾರೆ. ಕಾಣೆಯಾದಾಗ ಗುಲಾಬಿ ಬಣ್ಣದ ಟಾಪ್ ವೈಟ್ ಲೆಗ್ಗಿನ್ಸ್ ಧರಿಸಿರುತ್ತಾರೆ. ಈ ಮಹಿಳೆ ಮಾಹಿತಿ ದೊರೆತಲ್ಲಿ ಚಿತ್ರದುರ್ಗ ನಗರ ಪೊಲೀಸ್ ಠಾಣೆಗೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.