ಚಿತ್ರದುರ್ಗ: ದಸರಾ ಹಬ್ಬ ಹಿನ್ನೆಲೆ ಚಳ್ಳಕೆರೆ ನಗರದಲ್ಲಿ ವ್ಯಾಪಾರ ವಹಿವಾಟು ಜೋರು
ನಾಡ ಹಬ್ಬ ದಸರಾ ಹಿನ್ನೆಲೆ ಚಳ್ಳಕೆರೆ ನಗರದಲ್ಲಿ ಬುಧವಾರ ಆಯುಧ ಪೂಜೆಯ ಸಂಭ್ರಮ ಮನೆ ಮಾಡಿತ್ತು. ಆಯುಧ ಪೂಜೆಗೆ ಸಿದ್ದತೆಯಲ್ಲಿ ಬ್ಯೂಸಿಯಾಗಿದ್ದ ನಗರದ ಜನ, ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ರು. ಬೆಳಿಗ್ಗೆ 8 ಗಂಟೆಯಿಂದ ಮಾರ್ಕೇಟ್ ನಲ್ಲಿ ಕಿಕ್ಕಿರುದು ಜನಸಂದಣಿ ಇತ್ತು. ಹೂ, ಹಣ್ಣು, ಕುಂಬಳಕಾಯಿ, ತರಕಾರಿ ಖರೀದಿಗೆ ನಗರದ ಜನರು ಮುಗಿಬಿದ್ದಿದ್ದರು. ಇನ್ನೂ ಪ್ರತಿ ನಿತ್ಯಕ್ಕಿಂತ ಹೂವಿನ ಬೆಲೆ ಮಾತ್ರ ಗಗನಕ್ಕೇರಿತ್ತು, ಈ ನಡುವೆ ಬಾಳೆಗೊನೆ ಸೇರಿದಂತೆ ವಿವಿಧ ಪೂಜಾ ಸಾಮಾಗ್ರಿಗಳ ಖರೀದಿ ಕೂಡಾ ಜೋರಾಗಿತ್ತು. ಒಟ್ಟಾರೇ ನಾಡಹಬ್ಬ ದಸರಾ ಹಿನ್ನೆಲೆ ಚಳ್ಳಕೆರೆ ನಗರದಲ್ಲಿ ವ್ಯಾಪಾರ ವಹಿವಾಟು ಜೋರಿತ್ತು