ಯೆಲಹಂಕ: ವಂಚನೆ ಮಾಡುತ್ತಿದ್ದ ಗ್ಯಾಂಗ್ನಿಂದಲೇ ಹಣ ಸುಲಿಗೆ ಆರೋಪ, ಮೂವರು ಕಾನ್ಸ್ಟೇಬಲ್ ಸೇರಿ ನಾಲ್ವರನ್ನು ಬಂಧಿಸಿದ ಬಾಗಲೂರು ಪೊಲೀಸರು
ರೈಸ್ ಪುಲ್ಲಿಂಗ್ ಹೆಸ್ರಲ್ಲಿ ಜನ್ರಿಗೆ ವಂಚನೆ ಮಾಡ್ತಿದ್ದ ಗ್ಯಾಂಗ್ ಗೆ ಬ್ಲಾಕ್ ಮೇಲ್ ಮಾಡಿ ಹಣ ಪೀಕಿದ ಆರೋಪದ ಮೇಲೆ ಚಿಕ್ಕಜಾಲ ಪೊಲೀಸ್ ಠಾಣೆಯ ಮೂವರು ಪೊಲೀಸ್ ಕಾನ್ಸ್ಟೇಬಲ್ ಗಳನ್ನ ಬಾಗಲೂರು ಪೊಲೀಸ್ರು ಬಂಧಿಸಿದ್ದಾರೆ.. ಸಂತೋಷ್, ಮಂಜುನಾಥ್, ವಿಜಯ್ ಕುಮಾರ್ ಬಂಧಿತ ಪೊಲೀಸ್ ಸಿಬ್ಬಂದಿ.. ಚಿಕ್ಕಜಾಲ ಠಾಣಾ ವ್ಯಾಪ್ತಿಯಲ್ಲಿ ಹವಾಲ ಗ್ಯಾಂಗ್ ವೊಂದು ಆ್ಯಕ್ಟೀವ್ ಆಗಿತ್ತು.. ರೈಸ್ ಪುಲ್ಲಿಂಗ್ ಹೆಸ್ರಲ್ಲಿ ಅಕ್ರಮ ದುಡ್ಡು ಮಾಡೋದು, ಹವಾಲ ರೂಪದಲ್ಲಿ ಹಣ ವರ್ಗಾವಣೆ ಮಾಡೋ ಗ್ಯಾಂಗ್ ವೊಂದರ ಬೆನ್ನಟ್ಟಿದ್ದ ಮೂವರು ಪೊಲಿಸ್ ಸಿಬ್ಬಂದಿ ಅದೇ ಗ್ಯಾಂಗ್ ನಲ್ಲಿದ್ದ ಪಿ.ಕೆ ಎಂಬ ಇನ್ಫಾರ್ಮರ್ ನ ಬಳಸಿ ಗ್ಯಾಂಗ್ ನ ಟಚ್ ಮಾಡಿ ಲಾಕ್ ಮಾಡಿದ್ರು. ಈ ಸಂಬಂಧ ಮೂವರು ಪೋಲಿಸ್ರನ್ನ ಬಾಗಲೂರು ಪೊಲೀಸರು ಬಂಧಿಸಿದ್ದಾರೆ.