ಬೀದರ್: ನಗರದ ಕುಂಬಾರವಾಡಾದಲ್ಲಿ ಕಾರು ಡಿಕ್ಕಿ ಹೊಡೆದು ವಾಯು ವಿಹಾರಿ ವೃದ್ಧ ಸ್ಥಳದಲ್ಲೇ ಸಾವು
Bidar, Bidar | Oct 23, 2025 ಕಾರುಡಿಕ್ಕಿ ಹೊಡೆದ ಪರಿಣಾಮ ವಾಯು ವಿಹಾರಿ ವೃದ್ಧರೊಬ್ಬರು ಸ್ಥಳದಲ್ಲಿ ಮೃತಪಟ್ಟ ಘಟನೆ ಗುರುವಾರ ಬೆಳಗಿನ ಜಾವ 5:30ಕ್ಕೆ ಸಂಭವಿಸಿದೆ. ಅಪಘಾತದಲ್ಲಿ ಮೃತಪಟ್ಟ ದುರ್ದೈವಿಯನ್ನು ಕುಂಬಾರವಾಡ ಬಡಾವಣೆಯ ನಿವಾಸಿ ಭೀಮಣ್ಣ (76) ಎಂದು ತಿಳಿದುಬಂದಿದೆ. ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ಐವತ್ತು ಅಡಿ ದೂರದಷ್ಟು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಘಟನೆ ಕುರಿತು ನಗರದ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.