ಅಫಜಲ್ಪುರ: ಪ್ರಿಯಾಂಕ್ ಖರ್ಗೆ ಭೂಮಿಗಿಳಿದು ರೈತರ ಸಂಕಷ್ಟ ಅರಿಯಬೇಕು: ಗಾಣಗಾಪುರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ
ಕಲಬುರಗಿ : ಅತಿವೃಷ್ಟಿಯಿಂದ ಕಲಬುರಗಿ ಜಿಲ್ಲೆಯಲ್ಲಿ ಶೇ70 ರಷ್ಟು ಬೆಳೆಗಳು ಹಾಳಾಗಿದ್ದು, ಸರ್ಕಾರ ಕುಂಭಕರ್ಣ ನಿದ್ರೆಗೆ ಜಾರಿದೆ ಅಂತಾ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ.. ಸೆ29 ರಂದು ಸಂಜೆ 6 ಗಂಟೆಗೆ ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಗಾಣಗಾಪುರದ ಬಳಿ ಪ್ರವಾಹ ವಿಕ್ಷಣೆ ಬಳಿಕ ಮಾತನಾಡಿದ ಅವರು, ರಾಜ್ಯ ಸರ್ಕಾರ ರೈತರ ಬಳಿಗೆ ತೆರಳೊದು ಬಿಟ್ಟು ವೈಮಾನಿಕ ಸಮೀಕ್ಷೆಗೆ ಮುಂದಾಗಿದೆ.. ಸಚಿವ ಪ್ರಿಯಾಂಕ್ ಖರ್ಗೆ ಸಹ ನೆಲದ ಮೇಲೆ ಇರಲ್ಲ.. ಆಕಾಶ ಬಿಟ್ಟು ಭೂಮಿಗಳಿದು ರೈತರ ಬಳಿ ಹೋಗಬೇಕು ಅಂತಾ ವಿಜಯೇಂದ್ರ ಕಿಡಿಕಾರಿದ್ದಾರೆ.