ಬೆಳಗಾವಿ ಕಿರು ಮೃಗಾಲಯದಲ್ಲಿ 31 ಕೃಷ್ಣಮೃಗಗಳು ಸರಣಿ ಸಾವಿಗೀಡಾಗಿರುವುದಕ್ಕೆ ಕರೋನಾ ರೀತಿಯ ವೈರಸ್ ಕಾರಣ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ತಿಳಿಸಿದರು. ಕೃಷ್ಣಮೃಗಗಳ ಸರಣಿ ಸಾವಿನ ಕುರಿತು ನಗರದಲ್ಲಿ ಸೋಮವಾರ ಸಂಜೆ 6ಕ್ಕೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ ಸದ್ಯಕ್ಕೆ ಅವುಗಳಿಗೆ ವ್ಯಾಕ್ಸಿನೆಷನ್ ಕೊಡೊ ಹಾಗಿಲ್ಲ. ಯಾವುದಕ್ಕೂ ಉನ್ನತ ಅಧಿಕಾರಿಗಳ ಜೊತೆ ಚರ್ಚಿಸಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಚಿವ ಖಂಡ್ರೆ ಅವರು ತಿಳಿಸಿದರು.