ಮಂಡ್ಯ: ಕಬ್ಬು ಸರಬರಾಜು ಮಾಡಿದ ರೈತರಿಗೆ ಬಾಕಿಯಿರುವ ಹಣ ಪಾವತಿ ಮಾಡಿ: ನಗರದಲ್ಲಿ ಡಿ. ಸಿ ಡಾ. ಕುಮಾರ
Mandya, Mandya | Oct 13, 2025 ಜಿಲ್ಲೆಯಲ್ಲಿನ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಒದಗಿಸುವ ರೈತರಿಗೆ ನ್ಯಾಯಯುತವಾಗಿ ಪಾವತಿ ನೀಡಿ ಮತ್ತು ಹೀಗಾಗಲೇ ಬಾಕಿಯಿರುವ ಪಾವತಿಯನ್ನು ಶೀಘ್ರದಲ್ಲೆ ಒದಗಿಸಿ ಎಂದು ಜಿಲ್ಲಾಧಿಕಾರಿ ಡಾ. ಕುಮಾರ ಅವರು ತಿಳಿಸಿದರು. ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು. ಸಕ್ಕರೆ ಕಾರ್ಖಾನೆಗಳು ರೈತರಿಗೆ ಪಾವತಿ ಹಣವನ್ನು ನೀಡುತ್ತಿರುವ ಬಗ್ಗೆ ಅಧಿಕಾರಿಗಳು ನಿಗಾ ವಹಿಸಿ ಮತ್ತು ರೈತರಿಗೆ ಪಾವತಿ ಹಣ ಸಲ್ಲಿಸದ ಕಾರ್ಖಾನೆಗಳಿಗೆ ನೋಟಿಸ್ ನೀಡಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಹೇಳಿದರು. ಜಿಲ್ಲೆಯಲ್ಲಿನ ಸಕ್ಕರೆ ಕಾರ್ಖಾನೆಗಳು ಪಾವತಿ ಹಣವನ್ನು ನೀಡುತ್ತಿಲ್ಲ ಎಂದು ರೈತರಿಂದ ದೂರು ಬರುತ್ತಿದ್ದು, ರೈತರಿಗೆ ಅಧಿಕೃತವಾಗಿ 14 ದಿನದೊಳಗೆ ಪಾವತಿ ಮಾಡಬೇಕು ಎಂದರು.