ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನ ಸುಲೆಗಾಳಿ ಗ್ರಾಮದಲ್ಲಿ ನಿನ್ನೆ ಎರಡು ಕಾಡಾನೆಗಳು ವಿದ್ಯುತ್ ಸ್ಪರ್ಶಿಸಿ ಸಾವು ವಿಚಾರವಾಗಿ ಇಂದು ಸೋಮವಾರ 2 ಗಂಟೆಗೆ ಮಾಧ್ಯಮಗಳಿಗೆ ಮಾತನಾಡಿದ ಜಿಲ್ಲಾ ಡಿಎಫ್ ಓ ಕ್ರಾಂತಿ ಅವರು ನಿನ್ನೆ ನಮ್ಮ ಗಮನಕ್ಕೆ ಬಂದ ತಕ್ಷಣ ಭೇಟಿ ಕೊಟ್ಟು ಪರಿಶೀಲನೆ ಮಾಡಿದ್ದೇವೆ ಆದರೆ ಇಂದು ಮರಣೋತ್ತರ ಪರೀಕ್ಷೆ ಮಾಡುತ್ತಿದ್ದೇವೆ ಆದರೆ ಈಗಾಗಲೇ ಜಮೀನಿನಲ್ಲಿ ವಿದ್ಯುತ್ ಸ್ಪರ್ಶಿಸಿ ಸಾವು ಹಿನ್ನಲೆ ಜಮೀನಿನ ಮಾಲಕನ ಮೇಲೆ ದೂರು ದಾಖಲಿಸಿ ಅರೆಸ್ಟ್ ಮಾಡಿದ್ದೇವೆ ಆದರೆ ಈ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ್ದೇವೆ ಎಂದು ತಿಳಿಸಿದರು.