ಹುಮ್ನಾಬಾದ್: ನಗರದಲ್ಲಿ ನವರಾತ್ರಿ ಉತ್ಸವ ಅಂಗವಾಗಿ ಜೈ ಭವಾನಿ ನವರಾತ್ರಿ ಉತ್ಸವ ಸಮಿತಿ ವೇದಿಕೆಯಲ್ಲಿ ವಿಶೇಷ ಭಜನೆ
ನಗರದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ಇಲ್ಲಿನ ಜೈ ಭವಾನಿ ನವರಾತ್ರಿ ಉತ್ಸವ ಸಮಿತಿ ವೇದಿಕೆಯಲ್ಲಿ ಬುಧವಾರ ರಾತ್ರಿ 10: 15ಕ್ಕೆ ಕಲಬುರ್ಗಿಯ ಶರಣಬಸವೇಶ್ವರ ಭಜನಾ ಮಂಡಳಿ ವತಿಯಿಂದ ಭಜನೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ತಂಡದ ಪ್ರಮುಖ ರಾಜ್ ಕುಮಾರ್ ಶೆಟ್ಟಿ ಹಾಗೂ ಸಂಗಡಿಗರು ಅತ್ಯಾಕರ್ಷಕ ಭಜನೆಯನ್ನ ಸಾಗರಪಡಿಸಿ ಗಮನಸೆಳೆದರು. ಸಮಿತಿ ಅಧ್ಯಕ್ಷ ಬಾಬುರಾವ ಪೋಚಂಪಳ್ಳಿ, ಉಪಾಧ್ಯಕ್ಷ ಓಮಣ್ಣ ಭಾವಿ, ರವಿ ಮಾಡಗಿ, ಬಾಬುರಾವ ಶಂಕರಶೆಟ್ಟಿ ಇದ್ದರು.