ಬೆಂಗಳೂರು ಉತ್ತರ: ಸಮರ್ಪಕವಾಗಿ ಕೆಲಸಕ್ಕೆ ನಾಗರಿಕರ ಮೆಚ್ಚುಗೆ ತಾನಾಗಿಯೇ ಸಿಗಲಿದೆ - ಮಹೇಶ್ವರ್ ರಾವ್
ಇಂಜಿನಿಯರ್ ಹಾಗೂ ಸಿಬ್ಬಂದಿಗಳು ಸಮರ್ಪಕವಾಗಿ ಕೆಲಸ ಮಾಡಿದರೆ ನಾಗರಿಕರಿಂದ ತಾನಾಗಿಯೇ ಮೆಚ್ಚುಗೆ ಸಿಗಲಿದೆ ಎಂದು ಗ್ರೇಟರ್ ಬೆಂಗಳೂರು ಅಥಾರಿಟಿಯ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅಭಿಪ್ರಾಯ ವ್ಯಕ್ತಪಡಿಸಿದರು. ಪ್ರಾಧಿಕಾರ ಹಾಗೂ ಪಾಲಿಕೆಗಳ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ಸೆಪ್ಟೆಂಬರ್ 15ರಂದು ಮಧ್ಯಾಹ್ನ 12 ಗಂಟೆಗೆ ನೌಕರರ ಭವನದ ಬಸವ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಇಂಜಿನಿಯರ್ ದಿನಾಚರಣೆ ಹಾಗೂ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಅವರು ಮಾತನಾಡಿದರು.ಮಾತುಗಳು ಬರುತ್ತವೆ ಅದರ ಕಡೆ ಗಮನಹರಿಸಬಾರದು. ನಾವು ಉತ್ತಮವಾಗಿ ಕೆಲಸ ಮಾಡಿದರೆ ನಮ್ಮ ಕೆಲಸವೇ ಮಾತನಾಡುತ್ತದೆ" ಎಂದರು