ಇ-ಖಾತೆ ಸೇರಿದಂತೆ ರಾಯಚೂರು ಮಹಾನಗರ ಪಾಲಿಕೆಯಲ್ಲಿ ಇನ್ನಿತರೆ ದಾಖಲೆಗಳ ವಿಲೇವಾರಿ ವಿಳಂಬ ಸಮಸ್ಯೆ ಇತ್ಯರ್ಥಕ್ಕೆ ಕಂದಾಯ ಅದಾಲತ್ ಮಾಡಲಾಗುತ್ತಿದೆ. ಶುಕ್ರವಾರ 12 ಗಂಟೆಗೆ ಮಾಹಿತಿ ಲಭ್ಯವಾಗಿದ್ದು, ಇದರಿಂದ ಜನರ ದಾಖಲೆ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದು ಎಂಬ ಆಶಾ ಭಾವನೆಯಲ್ಲಿದ್ದಾರೆ. ಇಂದಿನಿಂದ ನಗರದ ವಿವಿಧ ವಾರ್ಡ್ ಗಳಲ್ಲಿ ಕಂದಾಯ ಅದಾಲತ್ ಮೂಲಕ ಮನೆ ಬಾಗಿಲಿಗೆ ಪಾಲಿಕೆಯ ದಾಖಲೆ ನೀಡುವ ಯೋಜನೆ ಹಮ್ಮಿಕೊಳ್ಳಲಾಗಿದೆ.