ದೇವದುರ್ಗ: ದೇವದುರ್ಗ : ಆರ್ ಎಸ್ ಎಸ್ 100 ಸಂಭ್ರಮ ಪತಸಂಚಲನ
ರಾಯಚೂರು ಜಿಲ್ಲೆಯ ದೇವದುರ್ಗ ಪಟ್ಟಣದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪಥ ಸಂಚಲನ ಶಾಂತಿಯುತವಾಗಿ ನೆರವೇರಿತು. ದೇವದುರ್ಗ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಈ ಒಂದು ಪಥಸಂಚಲನ ಜರುಗಿತು. ಆರ್ ಎಸ್ ಎಸ್ ಕಾರ್ಯಕರ್ತರು ಶಿಸ್ತಿನಿಂದ ಪತ ಸಂಚಲನದಲ್ಲಿ ಭಾಗವಹಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಹೆಜ್ಜೆ ಹಾಕಿ ದೇಶಭಕ್ತಿ ಮೆರೆದರು. ದಾರಿಯದ್ದಕ್ಕೂ ಮೆರವಣಿಗೆಯಲ್ಲಿ ಎಲ್ಲಾ ಕಾರ್ಯಕರ್ತರಿಗೆ ಹೂ ಮಳೆ ಸ್ವಾಗತಿಸಿತು. ಸರ್ಕಾರದ ಆದೇಶದನ್ವಯ ತಾಲೂಕು ಆಡಳಿತದಿಂದ ಪರವಾನಿಗೆ ಪಡೆದೆ ಇವತ್ತು ಪಥ ಸಂಚಲನ ಮಾಡಿದರು.