ಲಿಂಗಸೂರು: ಲಿಂಗಸುಗೂರು : ಅಡ್ವಾನ್ಸ್ ಪೇಮೆಂಟ್ ತೆಗೆದುಕೊಂಡು ಕೆಲಸ ಸರಿಯಾಗಿ ಮಾಡುತ್ತಿಲ್ಲ
ಎನ್ ಡಿ ವಡ್ಡರ್ ಕಂಪನಿ ಒಂದೇ ಮನೆಗೆ ಸೇರಿದ್ದು ಹೆಂಡತಿ ಮಕ್ಕಳ ಹೆಸರಿನ ಮೇಲೆ ಇದೆ. ಶಾಸಕ ವಜ್ಜಲ್ ಅವರ ವಡ್ಡರ್ ಕಂಪನಿಗೆ ಸರ್ಕಾರ ಯಾವುದೇ ಗುತ್ತಿಗೆದಾರರಿಗೆ ಕೊಡದೆ ಅಡ್ವಾನ್ಸ್ ಪೇಮೆಂಟ್ ಇವರಿಗೆ ಕೊಟ್ಟಿದೆ. ಆದರೆ ಇವರು ಕೆಲಸ ಮಾಡುತ್ತಿಲ್ಲ ಎಂದು TUCI ರಾಜ್ಯಧ್ಯಕ್ಷ ಆರ್ ಮಾನಸಯ್ಯ ಆರೋಪಿಸಿದರು. ಎನ್ ಡಿ ವಡ್ಡರ್ ಕಂಪನಿ ನಿಯಮಬಾಹಿರವಾಗಿ ಉಪಗುತ್ತಿಗೆ ಕೊಟ್ಟಿದೆ. ಉಪಗುತ್ತಿಗೆ ಪಡೆದವರು ಕೆಲಸ ಸಾಲಾ ಸೋಲ ಮಾಡಿ ಮುಗಿಸಿದ್ದಾರೆ. ಆದರೆ ಸರ್ಕಾರದಿಂದ ಹಣ ಪಡೆದ ಕಂಪನಿ ಮಾತ್ರ ಯಾವುದೇ ಕೆಲಸ ಮಾಡಿಲ್ಲ ಎಂದು ಆರೋಪಿಸಿದರು.